Introduction

Badami (Lat. 17º 57′; Long. 75º 52′) situated in thedistrict Bagalkot blessed with spectacular natural scenery. Its archaeological interest lies in a series of cave temples of 6th-7th century CE excavated for both Hindu and Jaina deities and structural temples and fortifications built during a date range from 6th to 16th centuries CE.

Historical Perspective

The historicity of Badami goes back to pre-historic times. Palaeoliths have been found near Sabaraphadi. Epigraphs mention it as Vatapi in Sanskrit and Badaviin Kannada. Pulakesi – I, the first independent ruler of the Chalukya dynasty rendered this ancient town impregnable by fortifying it and made it his capital (Vatapiadhisthana). The town surrounding the vast lake is held in embrace by the rugged sandstone hills built on the top with fortification on the north and south respectively. The northern one is called ‘bavanbandekote’ or ‘Fort comprising 52 massive rocks’ and the southern one is called ‘RanamandalaKote’ or ‘Fort of the battle field’. This region was under the control of the Mauryas and later under the Satavahanas. ‘Badamioi’ mentioned by Ptolemy in his ‘Geography’ (c. 150 CE) is equated with Badami. Badami cliff inscription of 543 CE is the first epigraph to refer to the fortification of the hill here. Since then, Badami continued to be the royal seat up to 757 CE, except for a brief span of twelve years of Pallava occupation from 642-54 CE. There are also a few inscriptions of Vijayanagara rulers as well as of the Adilshahis and Nawabs of Savanur. Thus, Badami played a significant role in the historical and cultural vicissitudes of Karnataka from the 6th century onwards.

Architectural Perspective

Political stability, abundant material prosperity combined with peaceful atmosphere and a high level of religious tolerance in the Chalukyan dominion fostered an all-round cultural development especially in the fields of art, architecture, literature, administration. For the first time in South Indian context, there was a great spurt in the religious architecture, both rock-cut and structural. Experimentation in arriving at functionally viable and aesthetically appealing temple models was carried out in the three centers of architecture viz., Aihole, Badami and Pattadakal.

A number of indigenous architectural elements were harmoniously blended with the architectural and sculptural traits of the northern and southern styles, then in vogue. The greatest contribution of the Chalukyas at Badami, thus is the evolving of the two main styles of temple architecture viz., the southern Dravidian Vimana and the northern RekhaNagaraPrasada through a series of experimentations that commenced at Aihole, continued at Badami and culminated at Pattadakal. The brief political conflicts with the Pallavas had a positive effect in so far as the efflorescence and diffusion of architectural and sculptural styles, proving beneficial to both.

ಬಾದಾಮಿ (ಅಕ್ಷಾಂಶ 17º 57′, ರೇಖಾಂಶ 75º 52′) ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಬಾದಾಮಿ ಇದೆ. ಪಶ್ಚಿಮ ಚಾಲುಕ್ಯ ಅಥವಾ ಬಾದಾಮಿ ಚಾಲುಕ್ಯರೆಂದೇ ಪ್ರಖ್ಯಾತರಾದ ಸಾಮ್ರಾಟರ ರಾಜಧಾನಿ ಪಟ್ಟಣವೇ ಬಾದಾಮಿ. ರಾಜ್ಯದಲ್ಲೇ ಅತ್ಯಂತ ಮನೋಹರವಾದ ನೈಸರ್ಗಿಕ ಪರಿಸರ ಮತ್ತು ಅತ್ಯಂತ ಸುಂದರವಾದ ಸ್ಮಾರಕಗಳನ್ನು ಹೊಂದಿರುವ ನಗರವಿದು. ಇಲ್ಲಿ ಚಾಲುಕ್ಯರು ಕ್ರಿ.ಶ. ಆರನೆಯ ಶತಮಾನದಿಂದ ನಿರ್ಮಾಣ ಪರಂಪರೆಗೆ ನಾಂದಿ ಹಾಡಿದರು. ಮುಂದಿನ ಅರಸರು ಕ್ರಿ.ಶ. 16ನೇ ಶತಮಾನದವರೆಗೆ ಹಲವಾರು ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ಗುಹಾಲಯಗಳ ಸರಣಿಯಲ್ಲಿ ಮತ್ತು ಹಲವಾರು ನಿರ್ಮಿತಿದೇಗುಲಗಳಲ್ಲಿ ಮತ್ತು ಕೋಟೆಯ ಗೋಡೆಗಳಲ್ಲಿ ಈ ಸ್ಥಳದ ಪುರಾತತ್ವಿಕ ಮಹತ್ವವಿರುವುದು.

ಬಾದಾಮಿಯ ಇತಿಹಾಸವನ್ನು ಪ್ರಾಗೈತಿಹಾಸಿಕ ಕಾಲದಿಂದ ಗುರುತಿಸಬಹುದು. ಶಾಸನಾಧಾರಗಳಿಂದ (ಜಂಬುಲಿಂಗ ದೇವಾಲಯದ ಸ್ಥಂಭ ಶಾಸನದಿಂದ) ಈ ಸ್ಥಳವನ್ನು ಆತಾಪಿ / ಬಾದಾಮಿ ಎಂದು ತಿಳಿದು ಬರುತ್ತದೆ. ಚಾಲುಕ್ಯ ವಂಶದ ಮೊದಲ ಪ್ರಬಲ ದೊರೆಯಾದ ಒಂದನೆಯ ಪುಲಕೇಶಿ ಆತಾಪಿಗೆ ಬಂದು ದುರ್ಗಮಕೋಟೆಯನ್ನು ಕಟ್ಟಿಅದನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡನು. ಈ ಪಟ್ಟಣವು ಅಗಸ್ತ್ಯತೀರ್ಥ ಪುಷ್ಕರಣಿ, ಕೋಟೆ, ಬುರುಜುಗಳನ್ನು ಹೊಂದಿರುವ ಗಿರಿಶ್ರೇಣಿಯಿಂದ ಸುತ್ತುವರೆದಿದೆ. ಈ ಬೆಟ್ಟಗಳಲ್ಲಿ ಉತ್ತರದ ಬೆಟ್ಟವನ್ನು “ಬಾವನ್ಬಂಡೆಕೋಟೆ” ಅಂದರೆ 52 ಬೃಹತ್ ಬಂಡೆಗಳನ್ನು ಹೊಂದಿರುವ ಕೋಟೆ ಎಂದೂ, ದಕ್ಷಿಣಗಿರಿಯನ್ನು “ರಣಮಂಡಲಕೋಟೆ” ಎಂದು ಕರೆಯುತ್ತಾರೆ. ಈ ಹೆಸರು ರಾಮಾಯಣ, ಮಹಾಭಾರತ ಮತ್ತು ಮಹಾಕೋಟೇಶ್ವರ ಮಹಾತ್ಮೆಯಲ್ಲಿ ಕಾಣಬಹುದು. ಐತಿಹಾಸಿಕ ಯುಗದಲ್ಲಿ ಈ ಪ್ರಾಂತ್ಯವು ಮೌರ್ಯರ ತದನಂತರ ಶಾತವಾಹನರ ಆಳ್ವಿಕೆಯಲ್ಲಿತ್ತು. ಟಾಲೆಮಿ ತನ್ನ “ಜಿಯೋಗ್ರಫಿ” ಯಲ್ಲಿ (ಕ್ರಿ.ಶ. 2ನೇ ಶತಮಾನ) ಈ ಸ್ಥಳವನ್ನು “ಬದಾಮಿಯೋಯ್” ಎಂದು ಕರೆಯುತ್ತಿದ್ದಾನೆ. ಒಂದನೆಯ ಪುಲಕೇಶಿಯ ಕಾಲದಲ್ಲಿ ಇಲ್ಲಿಯ ಕೋಟೆಯನ್ನು ಭದ್ರಪಡಿಸಿ ರಾಜಧಾನಿಯಾಗಿ ಮಾಡಿಕೊಳ್ಳಲಾಯಿತು. ಕ್ರಿ.ಶ. 543 ರ ಬಾದಾಮಿಯ ಬಂಡೆಗಲ್ಲು ಶಾಸನ ಈ ಸ್ಥಳದ ಮಹತ್ವವನ್ನು ತಿಳಿಸುವುದಲ್ಲದೆ, ಕ್ರಿ.ಶ. 642–655 ರ ಮಧ್ಯಕಾಲದಲ್ಲಿ ಬಾದಾಮಿ ಪಲ್ಲವರ ಅಧೀನದಲ್ಲಿದ್ದುದನ್ನು ಬಿಟ್ಟರೆ ಉಳಿದ ಸಂಪೂರ್ಣ ಕಾಲ ಕರ್ನಾಟಕ ರಾಜರ ಅಧೀನದಲ್ಲಿಯೇ ಇತ್ತು. ಬಾದಾಮಿಯಲ್ಲಿ ಹಲವಾರು ವಿಜಯನಗರದ ಅರಸರು ಮತ್ತು ಆದಿಲ್ಷಾಹಿ ಹಾಗೂ ಸವಣೂರಿನ ನವಾಬರ ಶಾಸನಗಳು ಇವೆ. ಹೀಗಾಗಿ ಬಾದಾಮಿ ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಮಹತ್ತರ ಪಾತ್ರವಹಿಸಿದೆ.


ವಾಸ್ತುಶಿಲ್ಪದ ದೃಷ್ಟಿಕೋನ:

ರಾಜಕೀಯ ಸ್ಥಿರತೆ, ಶಾಂತಿಯುತ ವಾತಾವರಣದಿಂದ ಕೂಡಿದ ಮತ್ತು ಸಾಮಾಜಿಕ, ರಾಜಕೀಯ ಪ್ರಗತಿ ಮತ್ತು ಉನ್ನತ ಮಟ್ಟದ ಧಾರ್ಮಿಕ ಸಹಿಷ್ಣುತೆಯನ್ನು ಹೊಂದಿದ್ದ ಚಾಲುಕ್ಯ ಸಾಮ್ರಾಜ್ಯ ಸರ್ವತೋಮುಖವಾದ ಪ್ರಗತಿಯನ್ನು, ಅದರಲ್ಲೂ ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಆಡಳಿತ ಮುಂತಾದ ಕ್ಷೇತ್ರಗಳಲ್ಲಿ ಅಮೋಘ ಕೊಡುಗೆಯನ್ನು ಸಲ್ಲಿಸಿದೆ.

ವಿಶೇಷವಾಗಿ ಈ ಕಾಲದಲ್ಲಿ ದಕ್ಷಿಣ ಭಾರತಕ್ಕೆ ಸಂಬಂಧಿಸಿದಂತೆ ಮೊಟ್ಟಮೊದಲ ಬಾರಿಗೆ ಧಾರ್ಮಿಕ ವಾಸ್ತು ಕ್ಷೇತ್ರಗಳಲ್ಲಿ ಹೊಸ ಹುರುಪು ಮೂಡಿಬಂದಿತು. ರಚನಾತ್ಮಕವಾಗಿಯೂ, ಸೌಂದರ್ಯಾತ್ಮಕವಾಗಿಯೂ ಇರುವಂತಹ ದೇವಾಲಯ ಮಾದರಿಗಳನ್ನು ಸಿದ್ಧಪಡಿಸಲು ಅನೇಕ ಪ್ರಯೋಗಗಳು ಐಹೊಳೆ, ಬಾದಾಮಿ ಮತ್ತು ಪಟ್ಟದಕಲ್ಲು ಮುಂತಾದ ಕಡೆಗಳಲ್ಲಿ ನಡೆದವು.

ಸಮಕಾಲೀನವಾಗಿ ಬಳಕೆಯಲ್ಲಿದ್ದ ದಕ್ಷಿಣ ಮತ್ತು ಉತ್ತರ ವಾಸ್ತುಶೈಲಿಗಳೊಂದಿಗೆ ಅನೇಕ ಸ್ಥಳೀಯ ವಾಸ್ತು ರೂಪಗಳನ್ನು ಸಮಯೋಚಿತವಾಗಿ ಬೆರೆಸಿದ ದೇವಾಲಯಗಳನ್ನು ರಚಿಸಲಾಯಿತು. ಬಾದಾಮಿ ಚಾಲುಕ್ಯರ ಮಹೋನ್ನತ ಕೊಡುಗೆಗಳಲ್ಲಿ ದಕ್ಷಿಣ ದ್ರಾವಿಡ ವಿಮಾನ ಮತ್ತು ಉತ್ತರ ನಾಗರ ಪ್ರಾಸಾದಗಳ ಮಾದರಿಗಳನ್ನು ಐಹೊಳೆಯಲ್ಲಿ ಪ್ರಾರಂಭಿಸಿ, ಬಾದಾಮಿಯಲ್ಲಿ ಮುಂದುವರೆದು, ಪಟ್ಟದಕಲ್ಲಿನಲ್ಲಿ ಪರಿಪೂರ್ಣತೆಯನ್ನು ಹೊಂದಿದ್ದರಿಂದ, ಈ ಪ್ರದೇಶವನ್ನು ವಾಸ್ತುಶಿಲ್ಪದ ಪ್ರಯೋಗಾಲಯವೆಂದು ಗುರುತಿಸಲಾಯಿತು. ಪಲ್ಲವರೊಂದಿಗೆ ಆಗಾಗ್ಗೆ ನಡೆಯುತ್ತಿದ್ದ ಕಲಹಗಳು ಇಬ್ಬರಿಗೂ ಅನುಕೂಲಕರವಾಗಿ ಒದಗಿ ಬಂದು, ಹೊಸ ಹೊಸ ವಾಸ್ತುಶಿಲ್ಪ ಮಾದರಿಗಳ ಉಗಮ ಮತ್ತು ವಿಕಾಸಕ್ಕೆ ಕಾರಣವಾದವು.

Bibliography: –

  1. Brown Percy, Indian Architecture (Hindu Period), D.B.Taraporewala & Sons Bombay1996.
  2. Cousens H. Chalukyan Architectural of the Kanarese District, Archaeological Survey of India, publication, New Delhi1996.
  3. Gupte R.S. Art and Architecture of Aihole, D.B. Taraporewala & Sons Bombay1967.
  4. Gazetteer of India, Karnataka State, Bagalkot District, Bangalore – 1996.
  5. Karnataka state Gazetteer, Part II, Government of Karnataka, Bangalore, 1983
  6. Padigar S.V. Inscriptions of the Calukyas of Badami, ICHR Southern Regional Centre, Bangalore2010.
  7. Padigar S.V. Badami, Dept of Archaeology, Museums and Heritage, Bangalore2012.
  8. S., The Chalukya of Badami, INTACH, New Delhi, 2016.
  9. Chinnasvami Sosale, N., Nayak, Ramesh and KotreshM.,Badami Chalukyaru Lekhana Samputa, Prasaranga, Kannada university, Vidyaranya, 2009.
  10. Qureshi, Dulari Cave Temple of India: Buddhist, Hindu, Jain, Bharatiya Kala Prakashana, Delhi, 2023.
  11. George Michell, Temple architecture and art of the early chalukya, Niyogi Books, New Delhi, 2014.

Badami English broacher

Badami Kannada broacher